THE FEELING OF GENDER DISABILITY IN SIDDHARAMA'S REAL VACHANAS
ಸಿದ್ಧರಾಮನನಿಜವಚನಗಳಲ್ಲಿ ಲಿಂಗ ವಿಕಳಾವಸ್ಥೆಯ ಭಾವ
DOI:
https://doi.org/10.29121/shodhkosh.v5.i1.2024.3597Abstract [English]
In the twelfth century, the Shiva Sharanas led their ideal married life and became guides for the future. The feeling of "Sharanas Sati Linga Pati" has been observed among the Veerashaiva devotees since the beginning. The vachana literature stands as a witness to this. The fact that they moved from worldly roles to spirituality is a fact that is evident from the life of the sharanas. They are examples of those who eat and fast and are celibate even after marriage. Siddharama, who is a very prominent Shiva Sharanas, has also mentioned this issue.
The vachanas of the Sati-Pati feeling are special in Siddharama. Siddarama, who considers herself a woman and Kapila Siddha Mallikarjuna as a man, reminds us of the devotional Gajesha Masanayya and Urilingadeva. The pain of separation in a woman's mind, the longing for Nallana's arrival, the joy of the mind when Nallana appears, and the unity of each other are so beautifully expressed in words.
Abstract [Hindi]
ಹನ್ನೆರಡನೆಯ ಶತಮಾನದಲ್ಲಿ ಶಿವಶರಣ ಶರಣೆಯರು ತಮ್ಮ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ ತಾವು ತಮ್ಮ ತಮ್ಮ ಆರಾಧ್ಯ ದೈವವನ್ನು ದರ್ಶಿಸಿ ಮುಂದಿನವರಿಗೆ ಮಾರ್ಗದರ್ಶಿಗಳಾಗಿದ್ದಾರೆ. ವೀರಶೈವ ಭಕ್ತರಲ್ಲಿ “ಶರಣ ಸತಿ ಲಿಂಗ ಪತಿ’ ಭಾವ ಮೊದಲಿನಿಂದಲೂ ಆಚರಣೆಯಲ್ಲಿದ್ದುದು ಕಂಡು ಬರುತ್ತದೆ. ವಚನ ಸಾಹಿತ್ಯ ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಲೌಖಿಕ ಭೂಮಿಕೆಯಿಂದ ಅಧ್ಯಾತ್ಮಿಕತೆಯ ಕಡೆಗೆ ಒಲಿದಿರುವುದು ಶರಣರ ಜೀವನದಿಂದ ತಿಳಿದು ಬರುವ ಅಂಶ. ಅವರು ಉಂಡು ಉಪವಾಸಿಗಳು, ಮದುವೆಯಾಗಿಯೂ ಬ್ರಹ್ಮಚಾರಿಗಳು ಎಂಬ ಮಾತಿಗೆ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ. ಶಿವಶರಣರಲ್ಲಿ ಬಹು ಪ್ರಮುಖರಾದ ಸಿದ್ಧರಾಮರು ಸಹ ಈ ವಿಷಯದ ಬಗೆಗೆ ಪ್ರಸ್ತಾಪಿಸಿದ್ದಾರೆ.
ಸತಿ-ಪತಿ ಭಾವದ ವಚನಗಳುಸಿದ್ದರಾಮನಲ್ಲಿ ವಿಶೇಷವಾಗಿವೆ. ಸಿದ್ದರಾಮ ತನ್ನನ್ನು ಹೆಣ್ಣಾಗಿಯೂ ಕಪಿಲಸಿದ್ಧಮಲ್ಲಿಕಾರ್ಜುನನ್ನು ಗಂಡಾಗಿಯೂ ಪರಿಭಾವಿಸಿ ನಡೆಸುವ ಭಕ್ತಿರತಿ ಗಜೇಶ ಮಸಣಯ್ಯ, ಉರಿಲಿಂಗದೇವರನ್ನು ನೆನಪಿಗೆ ತರುತ್ತದೆ. ಹೆಣ್ಣಿನ ಮನದ ವಿರಹ ವೇದನೆಯನ್ನು ನಲ್ಲನÀ ಆಗಮನದ ಕಾತರತೆಯನ್ನು ನಲ್ಲನು ಕಾಣಿಸಿಕೊಂಡಾಗಿನ ಮನದ ಸಂಭ್ರಮವನ್ನು ಒಬ್ಬರು ಇನ್ನೊಬ್ಬರಲ್ಲಿ ಲಯವಾಗುವ ಏಕೀಭಾವವನ್ನು ಅಷ್ಟು ನವಿರಾಗಿ ಮಾತಿನಲ್ಲಿ ಮೂಡಿಸಿರುವುದು ಮೆಚ್ಚುವಂತಹ.
Downloads
Published
How to Cite
Issue
Section
License
Copyright (c) 2024 Kumar Belale, K. Chandrakath

This work is licensed under a Creative Commons Attribution 4.0 International License.
With the licence CC-BY, authors retain the copyright, allowing anyone to download, reuse, re-print, modify, distribute, and/or copy their contribution. The work must be properly attributed to its author.
It is not necessary to ask for further permission from the author or journal board.
This journal provides immediate open access to its content on the principle that making research freely available to the public supports a greater global exchange of knowledge.